ಚಿತ್ರದುರ್ಗ : ಲೋಕಸಭೆ ಉಪಚುನಾವಣೆಗೆ ಪ್ರಚಾರಕಾರ್ಯ ನಡೆಸುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ವಾಗ್ವಾದ ಶುರುವಾಗಿದ್ದು, ಇದೀಗ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಶ್ರೀರಾಮುಲು ಅವರ ಕುರಿತು ವ್ಯಂಗ್ಯವಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮುಲು ಅವರನ್ನು ನಾವು ಸೋಲಿಸುವುದಕ್ಕೆ ಆಗುತ್ತಾ. ಶ್ರೀರಾಮುಲು ಅವರು ಪಕ್ಷ ಕಟ್ಟಿ, ಬಿಜೆಪಿ ಸೋಲಿಸಲು ಹೊರಟಿದ್ದರು. ಅಂತ ದೊಡ್ಡವರ ಬಗ್ಗೆ ನಾನು ಮಾತನಾಡಲ್ಲ ಎಂದು ಲೇವಡಿ ಮಾಡಿದ್ದಾರೆ. ಹಾಗೇ ಪ್ರತ್ಯೇಕ ಲಿಂಗಾಯತ ಹೇಳಿಕೆ ಕುರಿತು ಪ್ರತಿಕ್ರಿಯೆ