ಲಾಕ್ ಡೌನ್ ಪಾಲನೆ ಮಾಡುತ್ತಿರುವ ಜನರಿಂದಾಗಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ ಹತೋಟಿಗೆ ಬರುತ್ತಿದೆ. ಹೀಗಂತ ರಾಜ್ಯದ ಸಚಿವರೊಬ್ಬರು ಹೇಳಿದ್ದಾರೆ. ಕರ್ನಾಟಕಕ್ಕೆ ಕೊರೊನಾ ವೈರಸ್ ಕಾಲಿಟ್ಟ ನಂತರ ಇಲ್ಲಿಯವರಿಗೆ 98 ಪಾಜಿಟಿವ್ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 6 ಜನ ಗುಣಮುಖರಾಗಿ ಮನೆಗೆ ಹೋಗಿದ್ದಾರೆ. 3 ಜನ ಸಾವನ್ನಪ್ಪಿದ್ದು, 3,243 ಜನರ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಇದರಲ್ಲಿ 3025 ನೆಗಟಿವ್ ಬಂದಿದೆ. ಸಾಕಷ್ಟು ಪ್ರಯತ್ನ ಮಾಡಿದ ನಂತರ ಅಷ್ಟೋ ಇಷ್ಟೋ ಕಂಟ್ರೋಲ್