ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಮಾಧ್ಯಮದವರಿಗೆ ಕಾರ್ಮಿಕ ಸಚಿವ ಅವಮಾನಿಸಿದ ಘಟನೆ ನಡೆದಿದೆ.ಚಿತ್ರದುರ್ಗ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಮಾಧ್ಯಮದವರಿಗೆ ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವಮಾನಿಸಿದ್ದಾರೆ. ಈ ವೇಳೆ ಮಾಧ್ಯಮ ಪ್ರತಿನಿಧಿಗಳು ಮತ್ತು ಸಚಿವರ ನಡುವೆ ವಾಗ್ವಾದವೂ ನಡೆದಿದೆ. ಚಿತ್ರಿಕರಣ ಮಾಡುತ್ತಿದ್ದ ಕ್ಯಾಮರಮೆನ್ ಗಳಿಗೆ ಕ್ಯಾಮೆರಾ ತೆಗೆದುಕೊಂಡು ಹೊರ ಹೋಗಿ ಅಂತ ಸಚಿವ ಹೇಳಿದ್ದಾರೆ.ಸಭೆಗೆ ಅಡ್ಡಿಪಡಿಸಬೇಡಿ. ತಗೆಯಿರಿ ನಿಮ್ ಟ್ರೈಪ್ಯಾಡ್, ಹೊರಗೆ ಹೋಗಿ ಅಂತ ಗರಂ ಆಗಿ ಸಚಿವ ಹೇಳಿದ್ದಾರೆ. ಕ್ಯಾಮೆರಾ ಟ್ರೈಪ್ಯಾಡ್ ಹಿಡ್ಕೊಂಡು