ಬೆಂಗಳೂರಿನ ಸಿ.ವಿ.ರಾಮನ್ನಗರ, ನೆಲಮಂಗಲ ಮುಂತಾದ ಕಡೆ ಸ್ಪರ್ಧಿಸುವಂತೆ ಆಹ್ವಾನಿಲಾಗಿದೆ. ಆದರೆ, ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳುತ್ತದೆಯೋ ಅದರಂತೆ ನಾನು ನಡೆದುಕೊಳ್ಳುತ್ತೇನೆ ಎಂದು ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರ ಬದಲಾವಣೆ ಮಾಡುವ ಕುರಿತು ಪ್ರತಿಕ್ರಿಯಿಸಿದ ಅವರು, ಸದಸ್ಯಕ್ಕೆ ಟಿ.ನರಸಿಪುರ ಕ್ಷೇತ್ರದ ಶಾಸಕನಾಗಿದ್ದು, ಮುಂದಿನ ಚುನಾವಣೆಯ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ ಎಂದಿದ್ದಾರೆ. ನಂಜನಗೂಡಿನ ಜನರು ಕೂಡ ಸ್ಪರ್ಧಿಸಲು ಹೇಳಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಇದರ ಬಗ್ಗೆ ನಿರ್ಧಾರ ಮಾಡುತ್ತೇನೆ. ನನ್ನ