ಮಾಧ್ಯಮಗಳು ಕಳೆದ ಎರಡು ತಿಂಗಳಿನಿಂದ ಸುಳ್ಳು ವರದಿ ಮಾಡುವ ಮೂಲಕ ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿವೆ ಎಂದು ಮಾಧ್ಯಮಗಳ ಮೇಲೆ ಹರಿ ಹಾಯ್ದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಆಜ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದೆ. ಅದರ ಬಗ್ಗೆ ಮಾಧ್ಯಮಗಳು ಗುಂಪುಗಾರಿಕೆಯಿದೆ ಎಂದು ಸುಳ್ಳು ವರದಿ ಬಿತ್ತರಿಸಿದವು ಎಂದರು. ಮುಖ್ಯಮುಂತ್ರಿ ಹೆಚ್.ಡಿ. ಕುಮಾರಸ್ವಾಮಿ