ಸಮುದಾಯವಾರು ಡಿಸಿಎಂ ನೇಮಕ ವಿಚಾರ ಚರ್ಚೆಗೆ ಬಂದಿದ್ದು, ಈ ವಿಚಾರದಲ್ಲಿ ಹಲವು ಸಚಿವರು ಅಂತರ ಕಾಯ್ದುಕೊಂಡಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆ ಸಮುದಾಯವಾರು ಡಿಸಿಎಂ ನೇಮಕ ಆಗಬೇಕು ಎಂದು ಸಚಿವ ರಾಜಣ್ಣ ಆಗ್ರಹಿಸಿದ್ರು.. ಸಚಿವ ರಾಜಣ್ಣ ಆಗ್ರಹಕ್ಕೆ ಹಲವು ಸಚಿವರು ಸೊಪ್ಪು ಹಾಕದೇ ಅಂತರ ಕಾಯ್ದುಕೊಂಡಿದ್ದಾರೆ. ಸಚಿವರಾದ ಶಿವನಾಂದ ಪಾಟೀಲ್, ಶಿವರಾಜ್ ತಂಗಡಗಿ, ನಾಗೇಂದ್ರ, ಶರಣಪ್ರಕಾಶ್ ಪಾಟೀಲ್, ರಹೀಂ ಖಾನ್, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಹಲವು ಸಚಿವರು ಈ ವಿಚಾರದ ಚರ್ಚೆಯಲ್ಲಿ