ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಬಚ್ಚಿಡಲು ಸಾಧ್ಯವಿಲ್ಲ ಎಂದ ಸಚಿವ ಸುಧಾಕರ್

ಬೀದರ್| pavithra| Last Modified ಶುಕ್ರವಾರ, 30 ಏಪ್ರಿಲ್ 2021 (12:17 IST)
ಬೀದರ್ : ಸೋಂಕು ನಿಯಂತ್ರಣಕ್ಕೆ ಚೈನ್ ಲಿಂಕ್ ಕಟ್ ಮಾಡಬೇಕು. ಚೈನ್ ಲಿಂಕ್ ಕಟ್ ಮಾಡಬೇಕಾದ್ರೆ ಅದಕ್ಕೆ 14 ದಿನ ಬೇಕು ಎಂದು ಬೀದರ್ ನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಬೀದರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಅಷ್ಟಕ್ಕೂ ಸೋಂಕು ಕಡಿಮೆಯಾಗದಿದ್ರೆ ಕಷ್ಟ ಹೀಗಾಗಿ ಕ್ರಮ ಕೈಗೊಳ್ಳಲಾಗಿದ ಎಂದು ತಿಳಿಸಿದ್ದಾರೆ.

ಬೆಂಗಳೂರಿನಿಂದ ಇಂದಿನಿಂದ 260 ಹೊಸ ಆಕ್ಸಿಜನ್ ಬೆಡ್ ಗಳು ಬಳಕೆಗೆ ಲಭ್ಯವಾಗಲಿದೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಬಚ್ಚಿಡಲು ಸಾಧ್ಯವಿಲ್ಲ. ಅನ್ಯ ಕಾರಣಗಳಿಂದ ಮೃತಪಟ್ಟವರನ್ನು ಕೊರೊನಾ  ಸೋಂಕಿನಿಂದ ಮೃತಪಟ್ಟಿದ್ದಾರೆಂದು ಪರಿಗಣಿಸ್ತಿಲ್ಲ. ಸೋಂಕಿನಿಂದಲೇ ಮೃತಪಟ್ಟಿದ್ದಾರೆಂದು ಹೇಳಲು ಹೇಗೆ ಸಾಧ್ಯ? ಎಂದು ಬೀದರ್ ನಲ್ಲಿ ಆರೋಗ್ಯ ಸಚಿವ ಸುಧಾಕರ್ ಪ್ರಶ್ನಿಸಿದ್ದಾರೆ.



ಇದರಲ್ಲಿ ಇನ್ನಷ್ಟು ಓದಿ :