ಬೆಂಗಳೂರು: ಪಕ್ಕೆಲುಬು ಎಂದು ಹೇಳಲು ಪರದಾಡುವ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಶಿಕ್ಷಕನ ಮೇಲೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗರಂ ಆಗಿದ್ದಾರೆ. ಈ ಶಿಕ್ಷಕ ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ ಯಾವುದೋ ಸರ್ಕಾರಿ ಶಾಲೆಯ ಶಿಕ್ಷಕರು ತಮ್ಮ ವಿದ್ಯಾರ್ಥಿಗೆ ಪಕ್ಕೆಲುಬು ಎಂಬ ಪದ ಹೇಳಿಕೊಡುತ್ತಿರುವುದು ಮತ್ತು ಆತ ಅದನ್ನು ಹೇಳಲು ಪರದಾಡುವುದನ್ನು ಗೇಲಿ ಮಾಡಿ ವಿಡಿಯೋ ಹರಿಯಬಿಟ್ಟಿದ್ದರು.ಶಿಕ್ಷಕರಾದವರು ತಮ್ಮ ವಿದ್ಯಾರ್ಥಿಗಳ ತಪ್ಪನ್ನು ತಿದ್ದಬೇಕೇ