ಕಾಂಗ್ರೆಸ್ನಲ್ಲಿ ಸಿಎಂ ಹುದ್ದೆಯ ಪೈಪೋಟಿ ಜೊತೆಗೆ ಮಂತ್ರಿಗಿರಿ ಸ್ಥಾನದ ಮೇಲೂ ಆಯಾ ಸಮುದಾಯಗಳು ಒತ್ತಡ ಹಾಕುತ್ತಿವೆ.. ಅಲ್ಪಸಂಖ್ಯಾತರ 5 ಶಾಸಕರಿಗೆ ಮಂತ್ರಿಗಿರಿ ಹಾಗೂ ಒಬ್ಬರನ್ನ ಡಿಸಿಎಂ ಮಾಡುವಂತೆ ಒತ್ತಾಯ ಕೇಳಿ ಬಂದಿದೆ.. ಹಾವೇರಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಾಸೀರ್ ಖಾನ್ ಪಠಾಣ್ ಹೈಕಮಾಂಡ್ಗೆ ಮನವಿ ಮಾಡಿದ್ದಾರೆ.. ಇತಿಹಾಸದಲ್ಲಿ ಅತೀ ಹೆಚ್ಚು ಮತವನ್ನ ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಸಮುದಾಯ ನೀಡಿದೆ.. ಕಾಂಗ್ರೆಸ್ಗೆ ಮುಸ್ಲಿಮರು ಪ್ರತಿಶತ 90ರಷ್ಟು ಮತ ನೀಡಿದ್ದಾರೆ..