ಮುಂಬೈನಲ್ಲಿ ಕಾಂಗ್ರೆಸ್ ಶಾಸಕರಿಗೆ ಬಿ.ಎಸ್.ಯಡಿಯೂರಪ್ಪ ಗೃಹ ಬಂಧನ ಮಾಡಿದ್ದಾರೆ ಎಂದು ಸಚಿವರೊಬ್ಬರು ಆರೋಪ ಮಾಡಿದ್ದಾರೆ.ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರರಿಂದ ಕಾಂಗ್ರೆಸ್ ಶಾಸಕರಿಗೆ ಗೃಹ ಬಂಧನದಲ್ಲಿ ಇಡಲಾಗಿದೆ. ಮತ್ತೊಮ್ಮೆ ಆಪರೇಷನ್ ಕಮಲದ ಮೂಲಕ ಸರ್ಕಾರ ರಚನೆ ಮಾಡಲು ಹೊರಟಿರುವ ಬಿ.ಎಸ್. ವೈ ಮೇಲೆ ಮೋದಿ ಕ್ರಮ ತೆಗೆದುಕೊಳ್ಳಬೇಕು. ಹೀಗಂತ ಬೀದರ್ ನಲ್ಲಿ ಬಿಎಸ್ ವೈ ವಿರುದ್ಧ ಸಚಿವ ಬಂಡೆಪ್ಪ ಖಾಶೆಂಪೂರ್ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ ಕಡೆ ಇಡೀ ದೇಶ ನೋಡುತ್ತಿದೆ.