ಬೆಂಗಳೂರು: ಯೋಗೀಶ್ ಹತ್ಯೆ ಪ್ರಕರಣದಲ್ಲಿ ಹೆಸರು ಕೇಳಿಬಂದ ಹಿನ್ನಲೆಯಲ್ಲಿ ವಿಪಕ್ಷಗಳ ಟೀಕೆಗೆ ಗುರಿಯಾಗಿರುವ ಸಚಿವ ವಿನಯ್ ಕುಲಕರ್ಣಿ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದಾರೆ! ಒಂದೆಡೆ ಬಿಜೆಪಿ ವಿನಯ್ ಕುಲಕರ್ಣಿ ರಾಜೀನಾಮೆಗೆ ಪಟ್ಟು ಹಿಡಿದಿದ್ದರೆ, ಇನ್ನೊಂದೆಡೆ ಸಚಿವರು ವಿನಯ್ ಕುಲಕರ್ಣಿ ಮಾತ್ರ ಯಾರ ಕೈಗೂ ಸಿಗುತ್ತಿಲ್ಲ. ಆದರೆ ಬಿಜೆಪಿ ಪಟ್ಟಿಗೆ ಸೊಪ್ಪು ಹಾಕದ ಸಿಎಂ ಸಿದ್ದರಾಮಯ್ಯ, ವಿನಯ್ ಕುಲಕರ್ಣಿಗೆ ರಾಜೀನಾಮೆ ಕೊಡಬೇಕಾಗಿಲ್ಲ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.ಹಾಗಿದ್ದರೂ ವಿಪಕ್ಷಗಳ ಒತ್ತಡದ ಹಿನ್ನಲೆಯಲ್ಲಿ