ಬಸ್ ಸ್ಟಾಂಡ್ ನಲ್ಲಿ ಪಿಕ್ ಪಾಕೇಟ್ ಮಾಡುವವರನ್ನ ಲಾಕಪ್ ನಲ್ಲಿ ಹಾಕಿ ಹೊಡೆದು ವಸೂಲಿ ಮಾಡ್ತಾರೆ. ಹಾಗೇ ಸಚಿವ ಜಮೀರ್ ಅವರನ್ನ ಪೊಲೀಸರು ಲಾಕಪ್ ನಲ್ಲಿ ಹಾಕಿ ಒದ್ದರೆ ಸತ್ಯ ಹೊರ ಬರುತ್ತೆ. ಹೀಗಂತ ಬಿಜೆಪಿ ಮುಖಂಡ ಟಾಂಗ್ ನೀಡಿದ್ದಾರೆ.ಚಿತ್ರದುರ್ಗದಲ್ಲಿ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದು, ಜಮೀರ್ ಅಹ್ಮದ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. IMA ಪ್ರಕರಣದಲ್ಲಿ ಜಮೀರ್ ಇದ್ದಾರೆ ಎಂದು ಇಡಿ ಯವರು ನೋಟಿಸ್ ನೀಡಿದ್ದಾರೆ.