ತುಮಕೂರು: ಗೆಳತಿಯ ಮನೆಗೆ ಖುಷಿಯಿಂದಲೇ ಹೋಗಿದ್ದ 8 ನೇ ತರಗತಿ ವಿದ್ಯಾರ್ಥಿನಿ ಈಗ ಗರ್ಭಿಣಿಯಾಗಿದ್ದಾಳೆ! ವಿಚಾರಣೆ ಮಾಡಿದಾಗ ಆಕೆಯ ಮೇಲೆ ಅತ್ಯಾಚಾರ ನಡೆದಿದ್ದು ಬೆಳಕಿಗೆ ಬಂದಿದೆ.ಕೊರಟಗೆರೆಯಲ್ಲಿ ಈ ಘಟನೆ ನಡೆದಿದ್ದು, ನೋಟ್ಸ್ ತರಲೆಂದು ಬಾಲಕಿ ಗೆಳತಿಯ ಮನೆಗೆ ಹೋಗಿದ್ದಳು. ಆ ವೇಳೆ ಅಲ್ಲಿದ್ದ ಆರೋಪಿ ಆಕೆಗೆ ಕುಡಿಯುವ ನೀರಿಗೆ ಮತ್ತು ಬರಿಸುವ ಔಷಧಿ ಹಾಕಿ ಕೊಟ್ಟಿದ್ದಾನೆ. ಬಳಿಕ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.ಈ ವಿಚಾರ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ.