ಬೆಂಗಳೂರು : ಶಾಲೆಯ ವಾರ್ಷಿಕೋತ್ಸವದ ದಿನ ಜಗಳ ಮಾಡಿದ ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬನನ್ನು ಆತನ ಆರು ಜನ ಸ್ನೇಹಿತರು ಅಪಹರಿಸಿ ಹಿಂಸೆ ನೀಡಿದ ಘಟನೆ ಬೆಂಗಳೂರಿನ ರಾಜಗೋಪಾಲ ನಗರದಲ್ಲಿ ನಡೆದಿದೆ. ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಜ.19ರಂದು ಸಂಜೆ 7.30ಕ್ಕೆ ಮನೆಯ ಸಮೀಪದಲ್ಲಿರುವ ಖಾಸಗಿ ಶಾಲೆಯ ವಾರ್ಷಿಕೋತ್ಸವಕ್ಕೆ ಹೋಗಿದ್ದ. ಅಲ್ಲಿ ಈತನಿಗೂ ಮತ್ತು ಸ್ನೇಹಿತರಿಗೂ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಎರಡು ದಿನಗಳ ಬಳಿಕ, ಸೋಮವಾರ (ಜ.21)