ಬೆಂಗಳೂರು : ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್ ಶಾಸಕರ ಸಭೆ ಕರೆದಿದ್ದು, ಈ ಸಭೆಗೆ ಎಲ್ಲಾ ಅತೃಪ್ತ ಶಾಸಕರು ಹಾಜರಾಗುತ್ತಾರಾ? ಎಂಬ ಕುತೂಹಲಿ ಇದೀಗ ರಾಜಕೀಯ ವಲಯದಲ್ಲಿ ಮೂಡಿಸಿದೆ. ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ 3.30 ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿರುವ ಶಾಸಕಾಂಗ ಸಭೆಗೆ ಎಲ್ಲಾ ಶಾಸಕರು ಹಾಜರಾಗುವಂತೆ ಖಡಕ್ ಎಚ್ಚರಿಕೆಯ ಪತ್ರ ಬರೆದಿದ್ದು, ಸಭೆಗೆ ಗೈರಾದ್ರೆ ಶಿಸ್ತು ಕ್ರಮ ಜರುಗಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಗೋಕಾಕ್