ಸಿಎಂ ಸಿದ್ದರಾಮಯ್ಯರನ್ನು ನಿದ್ದೆ ರಾಮಯ್ಯ ಎಂದು ಜರಿಯುತ್ತಿದ್ದ ಬಿಜೆಪಿ ನಾಯಕರು ಇಂದು ತಾವೇ ಸಭೆಯಲ್ಲಿ ನಿದ್ರೆಗೆ ಶರಣಾಗಿ ತಾವೇನು ಕಮ್ಮಿಯಿಲ್ಲ ಎನ್ನುವುದು ತೋರಿಸಿಕೊಟ್ಟಿದ್ದಾರೆ. ಬಿಜೆಪಿ ಸಭೆಯಲ್ಲಿ ವೇದಿಕೆಯ ಮೇಲಿದ್ದ ಬಿಜೆಪಿ ನಾಯಕರೆಲ್ಲ ಗಡದ್ದು ನಿದ್ದೆಗೆ ಮೊರೆಹೋದ ಘಟನೆ ವರದಿಯಾಗಿದೆ. ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಚುನಾವಣೆ ಉಸ್ತುವಾರಿಗಳಾದ ಪ್ರಕಾಶ್ ಜಾವ್ಡೇಕರ್ ಮತ್ತು ಸಹ ಉಸ್ತುವಾರಿ ಪಿಯೂಷ್ ಗೋಯಲ್ ಪಾಲ್ಗೊಂಡಿದ್ದ ಸಭೆಯಲ್ಲಿ ಬಿಜೆಪಿ ನಾಯಕರು ಹೊಟ್ಟೆ ತುಂಬಾ ತಿಂದು ಗಡದ್ದು