ಬೆಂಗಳೂರು: ಸಿಡಿ ವಿವಾದದಿಂದಾಗಿ ರಾಜೀನಾಮೆ ನೀಡಿರುವ ಜಲಸಂಪನ್ಮೂಲ ಖಾತೆ ಸಚಿವ ರಮೇಶ್ ಜಾರಕಿಹೊಳಿ ಸ್ಥಾನವನ್ನು ಅವರ ಸಹೋದರ ಬಾಲಚಂದ್ರ ಜಾರಕಿಹೊಳಿಗೆ ನೀಡುವಂತೆ ಶಾಸಕರು ಸಿಎಂ ಮೇಲೆ ಒತ್ತಡ ಹೇರಿದ್ದಾರೆ. ನಿನ್ನೆ 14 ಜನ ಶಾಸಕರ ತಂಡ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ರಮೇಶ್ ಜಾರಕಿಹೊಳಿ ಹೊಂದಿದ್ದ ಜಲಸಂಪನ್ಮೂಲ ಖಾತೆಯನ್ನು ಬಾಲಚಂದ್ರ ಜಾರಕಿಹೊಳಿಗೆ ನೀಡುವಂತೆ ಒತ್ತಾಯಿಸಿದ್ದಾರೆ.ಈ ಮೊದಲು ರಮೇಶ್ ಜಾರಕಿಹೊಳಿ ಕೂಡಾ ರಾಜೀನಾಮೆ ನೀಡುವಾಗ ತನ್ನ ಖಾತೆಯನ್ನು ತಮ್ಮನಿಗೆ ನೀಡುವಂತೆ