ಬೆಂಗಳೂರು : ಸಚಿವ ಸ್ಥಾನಕ್ಕಾಗಿ ಮುದ್ದೇಬಿಹಾಳ ಬಿಜೆಪಿ ಶಾಸಕ ಎ.ಎಸ್ ಪಾಟೀಲ್ ನಡವಳ್ಳಿ ಲಾಬಿ ನಡೆಸಿದ್ದು, ದೆಹಲಿಯಲ್ಲಿ ಸಿಎಂ ಯಡಿಯೂರಪ್ಪ ಭೇಟಿಯಾಗಿ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ನಿನ್ನೆ ದೆಹಲಿಯಲ್ಲಿ ಹಾಲಪ್ಪ ಆಚಾರ್ ಸಿಎಂ ಅವರನ್ನು ಭೇಟಿಯಾಗಿದ್ದರು. ಹಾಲಪ್ಪ ಆಚಾರ್, ನಡವಳ್ಳಿ ಒಂದೇ ಸಮುದಾಯವಾದ ರೆಡ್ಡಿ ಲಿಂಗಾಯುತ ಸಮುದಾಯದ ಶಾಸಕರಾಗಿರುವ ಹಿನ್ನಲೆ ಸಚಿವ ಸ್ಥಾನಕ್ಕೆ ನಡವಳ್ಳಿ ಲಾಬಿ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ದೆಹಲಿಯ ಕರ್ನಾಟಕ ಭವನದಲ್ಲಿ ಪಾಟೀಲ್ ನಡವಳ್ಳಿ ಸಿಎಂ