ಇನ್ನೊಂದು ವಾರ ನನ್ನ ಮನೆ ಹಾಗೂ ಕಚೇರಿಗೆ ಜನರು ಬರಬಾರದು ಎಂದು ಶಾಸಕರೊಬ್ಬರು ವಿನಂತಿಸಿಕೊಂಡಿದ್ದಾರೆ. ಹೊಸದುರ್ಗ ಕ್ಷೇತ್ರದ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಈ ರೀತಿ ಮನವಿ ಮಾಡಿದ್ದಾರೆ.ಜ್ವರದಿಂದ ಬಳಲುತ್ತಿದ್ದು, ಮನೆಯಲ್ಲೇ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.ಇನ್ನು, ಹೋಂ ಐಸೋಲೇಷನ್ ಆಗಿದ್ದು, ಪ್ರತಿಯೊಬ್ಬರೂ ಕೊರೊನಾ ತಡೆಗಾಗಿ ಮುಂಜಾಗೃತೆ ಕ್ರಮ ಕೈಗೊಳ್ಳಬೇಕು.ತಮ್ಮ ಸಂಪರ್ಕಕ್ಕೆ ಬಂದವರು ತಪ್ಪದೇ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಹೇಳಿದ್ದಾರೆ.