ಜಿಲ್ಲೆಯ ಪ್ರಭಾವಿ ಶಾಸಕರೆಂದೇ ಗುರ್ತಿಸಿಕೊಂಡಿರುವ ಅಫಜಲಪುರದ ಶಾಸಕ ಮಾಲೀಕಯ್ಯ ಗುತ್ತೇದಾರ್ ಅವರನ್ನು ಕಾರ್ಯಕ್ರಮವೊಂದರ ವೇದಿಕೆಯಲ್ಲಿಯೇ ತಾಲೂಕು ಪಂಚಾಯಿತಿ ಉಪಾಧ್ಯಕ್ಷರೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಹಾಲಿನ ಶಿಥಲೀಕರಣ ಘಟಕ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ ಮಾಲೀಕಯ್ಯ ಗುತ್ತೆದಾರ್ ಹಾಗೂ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಭಿಮಾಶಂಕರ ಹೋನ್ನಕೇರಿ ನಡುವೆ ವೇದಿಕೆಯಲ್ಲಿ ಜಟಾಪಟಿ ನಡೆದಿದೆ. ಉದ್ಘಾಟನೆ ಬಳಿಕ ಭಾಷಣ ಶುರುಮಾಡಿದ ಮಾಲೀಕಯ್ಯ ಗುತ್ತೇದಾರ್ ತಮ್ಮ ಅಧಿಕಾರ ಅವಧಿಯಲ್ಲಿ ರಾಜ್ಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ.