ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಗೂಂಡಾಗಿರಿ ಪ್ರಕರಣ ಸದನದಲ್ಲೂ ಪ್ರತಿಧ್ವನಿಸಿದೆ. ಈ ಕುರಿತು ವಿಪಕ್ಷ ಸದಸ್ಯರು ಗದ್ದಲವೆಬ್ಬಿಸುತ್ತಿದ್ದಂತೆ ಶಾಸಕ ಹ್ಯಾರಿಸ್ ಭಾವುಕರಾಗಿ ಕ್ಷಮೆ ಯಾಚಿಸಿದ್ದಾರೆ. ನನ್ನ ಮಗ ತಪ್ಪು ಮಾಡಿದ್ದಾನೆ. ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ ಎಂದು ಕೈ ಮುಗಿದು ಸದನದಲ್ಲಿ ಕ್ಷಮೆ ಯಾಚಿಸಿದ ಹ್ಯಾರಿಸ್, ನಾನು ಈ ಮನೆಯ (ಸದನ) ಸದಸ್ಯ. ಹಾಗೇ ಒಬ್ಬ ತಂದೆ ಕೂಡಾ. ತಪ್ಪು ಮಾಡಿರುವ ಮಗನನ್ನು ಶರಾಣಗತಿ ಮಾಡಿಸಿದ್ದೇನೆ.ಕಾನೂನಿಗಿಂತ