ಚಿಕ್ಕಮಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೃಂಗೇರಿ ಶಾಸಕ ಜೀವರಾಜ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಗೌರಿ ಲಂಕೇಶ್ ಪತ್ರಿಕೆಯಲ್ಲಿ ಚಡ್ಡಿಗಳ ಮಾರಣಹೋಮ ಅಂತ ಬರೆಯದೇ ಇದ್ದಿದ್ದರೆ ಇವತ್ತು ಉಳಿಯುತ್ತಿರಲ್ಲವೇ? ಎಂದಿದ್ದಾರೆ. ಶೃಂಗೇರಿ ನಗರದಲ್ಲಿ ನಡೆದ ಬೈಕ್ ಜಾಥಾದಲ್ಲಿ ಮಾತನಾಡಿದ ಜೀವರಾಜ್, ಸಿದ್ದರಾಮಯ್ಯನವರ ಸರ್ಕಾರದಲ್ಲಿ 11 ಆರ್ ಎಸ್ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಹತ್ಯೆ ನಡೆದಾಗ ಚಡ್ಡಿಗಳ ಮಾರಣಹೋಮ ಅಂತ ಬರೆದಿದ್ದರು. ಅದನ್ನು ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದೂಗಳ ಮಾರಣಹೋಮ