ಹಾಸನ : ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಗೆಲ್ಲೋದಿಲ್ಲ ಎಂದು ಶಾಸಕ ಪ್ರೀತಂಗೌಡ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಇದೀಗ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. 1.39 ನಿಮಿಷದ ಆಡಿಯೋದಲ್ಲಿ ಕಾರ್ಯಕರ್ತ ಹಾಗೂ ಶಾಸಕರ ನಡುವೆ ಸಂಭಾಷಣೆ ನಡೆದಿದೆ ಎನ್ನಲಾಗಿದ್ದು, ಇದರಲ್ಲಿ ಏಳು ತಿಂಗಳ ಹಿಂದೆ ಎ.ಮಂಜು ಹಾಕಿಸಿದ ಪೊಲೀಸ್ ಕೇಸ್ ನ್ನು ಬಿಜೆಪಿ ಮರೆತಿಲ್ಲ. ಎ. ಮಂಜು ಎರಡು ಲಕ್ಷ ಎಂಬತ್ತು ಸಾವಿರ