ನನ್ನ ಕೊಂಡೊಕೊಳ್ಳುವ ಶಕ್ತಿ ಬಿಜೆಪಿಗೆ ಇಲ್ಲ ಎಂದ ಶಾಸಕ!

ದೇವನಹಳ್ಳಿ, ಬುಧವಾರ, 13 ಫೆಬ್ರವರಿ 2019 (14:35 IST)

ಬಿಜೆಪಿ ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ ಎನ್ನಲಾಗಿದ್ದ ಬೆಂಗಳೂರಿಗೆ ಆಗಮಿಸಿದ್ದಾರೆ. ನನ್ನ ಕೊಂಡುಕೊಳ್ಳುವ ತಾಕತ್ತು ಬಿಜೆಪಿಯವರಿಗೆ ಇಲ್ಲ ಎಂದು ಹೇಳಿದ್ದಾರೆ.

ಶಾಸಕ ನಾರಾಯಣಗೌಡ ತಡರಾತ್ರಿ ಮುಂಬೈನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ರಾತ್ರಿ 1.10 ರ ಸುಮಾರಿಗೆ ಆಗಮಿಸಿದ ಕೆ.ಆರ್ ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡರನ್ನ ಸಚಿವ ಸಾ.ರಾ. ಮಹೇಶ್, ಶಾಸಕ ಶಿವಲಿಂಗೇಗೌಡ ಬರಮಾಡಿಕೊಂಡರು. ಈ ವೇಳೆ ಕೆಂಪೇಗೌಡ ಏರ್ಪೋಟ್ ನಲ್ಲಿ ಮಾತನಾಡಿದ ಶಾಸಕ ನಾರಾಯಣಗೌಡ, ನಾನು ಅನಾರೋಗ್ಯದ ‌ನಿಮಿತ್ಯ ಮುಂಬೈ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ.

ಯಾವದೇ ಅಪರೇಷನ್ ಕಮಲಕ್ಕೆ ಒಳಗಾಗಿಲ್ಲ ಎಂದರು. ಜತೆಗೆ ನನಗೆ ಬಿಜೆಪಿಯವರು ಸಿಎಂ ಮಾಡ್ತೀನಿ ಅಂದ್ರು ನಾನು ಬಿಜೆಪಿಗೆ ಹೋಗಲ್ಲ. ನನ್ನನ್ನು ಕೊಂಡುಕೊಳ್ಳುವ ತಾಕತ್ತು ಬಿಜೆಪಿಯವರಿಗಿಲ್ಲ. ನನಗೆ ಬಿಜೆಪಿಯ ಹತ್ತು ಜನ ಶಾಸಕರನ್ನ ಕರೆತರುವ ಕೆಪಾಸಿಟಿ ಇದೆ ಅಂತಾ ಇದೇ ವೇಳೆ ತಿಳಿಸಿದರು.

ಇನ್ನೂ ನನ್ನ ಎಲ್ಲಾ ವ್ಯವಹಾರಗಳು ಮುಂಬೈನಲ್ಲಿರುವ ಕಾರಣ ಮುಂಬೈಗೂ ನನಗೂ ನಂಟಿದೆ. ನಾನು ಮುಂಬೈನಲ್ಲಿದ್ದರೂ ಕುಮಾರಣ್ಣನ ಸಂಪರ್ಕದಲ್ಲಿದ್ದೆ ಅಂತಾ ಶಾಸಕ ನಾರಾಯಣಗೌಡ ಹೇಳಿದ್ದಾರೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಖರೀದಿಸಿದ್ದು ಮೊಬೈಲ್: ಕೈಗೆ ಸಿಕ್ಕಿದ್ದು ಏನು ಗೊತ್ತಾ?

ಗ್ರಾಹಕರು ಆನ್ ಲೈನ್ ನಲ್ಲಿ ಮೊಬೈಲ್ ಖರೀದಿ ಮಾಡಿ ಈಗ ಪೇಚಿಗೆ ಸಿಲುಕಿಕೊಂಡಿದ್ದಾರೆ.

news

ಡಿಸಿ ನಿವಾಸದ ಪಕ್ಕದಲ್ಲೇ ಪ್ರಾಣಬಿಟ್ಟ ಹಸುಳೆ; ಕ್ರೂರತನ ಮೆರೆದ ತಾಯಿ!

ಆಗಷ್ಟೇ ಹುಟ್ಟಿದ ಹೆತ್ತ ಹಸುಳೆಯ‌ನ್ನು ತಾಯಿಯೊಬ್ಬಳು ರಸ್ತೆ ಬದಿ ಮಲಗಿಸಿ ಹೋದ ಘಟನೆ ನಡೆದಿದೆ.

news

ಪಡ್ಡೆಹುಡುಗ-ಹುಡುಗಿಯರ ಅಡ್ಡಾದಿಡ್ಡಿ ಬೈಕ್ ಸವಾರಿ - ಲಗಾಮು ಯಾವಾಗ?

ಇತ್ತೀಚಿನ ದಿನಗಳಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಎರ್ರಾಬಿರ್ರಿಯಾಗಿ ವಾಹನ ಓಡಿಸುವವರ ಸಂಖ್ಯೆ ...

news

ಪ್ರೀತಿಯಲ್ಲಿ ಮೋಸ ಹೋದ ಯುವತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

ಮೈಸೂರು : ಪ್ರಿಯಕರ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಕ್ಕೆ ಯುವತಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ...