ಸಚಿವ ಹೆಚ್.ಡಿ.ರೇವಣ್ಣ ಸತ್ಯಹರಿಶ್ಚಂದ್ರರೇ?... ಅವರು ಕೂಡಲೇ ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ಅವರು ಮಾಡಿರುವ ಎಲ್ಲಾ ಹಗರಣಗಳನ್ನು ಬಯಲಿಗೆ ಹಾಕುತ್ತೇನೆ. ಹೀಗಂತ ಬಿಜೆಪಿ ಶಾಸಕ ಎಚ್ಚರಿಸಿದ್ದಾರೆ. ಸಚಿವ ಹೆಚ್.ಡಿ.ರೇವಣ್ಣ ವಿರುದ್ಧ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಗರಂ ಆಗಿದ್ದಾರೆ. ತಮ್ಮನ್ನು 420 ಎಂದು ಟೀಕಿಸಿದ್ದ ಸಚಿವ ರೇವಣ್ಣ ಅವರ ವಿರುದ್ಧ ಹರಿಹಾಯ್ದಿರುವ ರೇಣುಕಾಚಾರ್ಯ, ರೇವಣ್ಣ ವಯಸ್ಸಿನಿಂದ ಹಿರಿಯರಿದ್ದು, ಅವರಿಂದ ಈ ರೀತಿಯ ಮಾತುಗಳನ್ನು ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ. ತಮ್ಮ ವಿರುದ್ಧ ಕೀಳುಮಟ್ಟದ ಟೀಕೆ