ಬೆಂಗಳೂರು: ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಅರಸೀಕೆರೆಯಲ್ಲಿ ಬಿಜೆಪಿಯಿಂದ ಯಡಿಯೂರಪ್ಪ ಸಂಬಂಧಿ ಮರಿಸ್ವಾಮಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.ಅರಸಿಕೆರೆಯಲ್ಲಿ ವಿ ಸೋಮಣ್ಣ ಪುತ್ರ ಡಾ. ಅರುಣ್ ಸೋಮಣ್ಣ ಸ್ಪರ್ಧಿಸುವುದಾಗಿ ಈ ಮೊದಲು ಸುದ್ದಿ ಬಂದಿತ್ತು. ಆದರೆ ಇದೀಗ ಅರುಣ್ ಕಣದಿಂದ ಹಿಂದೆ ಸರಿದಿದ್ದು, ಆ ಅದೃಷ್ಟ ಮರಿಸ್ವಾಮಿಗೆ ಒಲಿದುಬಂದಿದೆ.ಯಡಿಯೂರಪ್ಪ ಸಂಬಂಧಿಯೂ ಆಗಿರುವ ಮರಿಸ್ವಾಮಿ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯನಲ್ಲದೆ, ಉದ್ಯಮಿಯೂ ಹೌದು. ಇದೀಗ ಇವರ ಹೆಸರನ್ನು ಅಧಿಕೃತವಾಗಿ ಘೋಷಿಸುವುದೊಂದೇ