ಚರಂಡಿ ನೀರು ಮನೆಗೆ ನುಗ್ಗಿದ ಹಿನ್ನಲೆ; ಅಧಿಕಾರಿಗಳಿಗೆ ಶಾಸಕ ಸೋಮಶೇಖರ್ ರೆಡ್ಡಿ ಪುಲ್ ಕ್ಲಾಸ್

ಬಳ್ಳಾರಿ| pavithra| Last Modified ಮಂಗಳವಾರ, 3 ಸೆಪ್ಟಂಬರ್ 2019 (11:48 IST)
ಬಳ್ಳಾರಿ : ಚರಂಡಿ ನೀರಿ ಮನೆಗೆ ನುಗ್ಗಿದ ಹಿನ್ನಲೆಯಲ್ಲಿ ಬಳ್ಳಾರಿ ಅಧಿಕಾರಿಗಳಿಗೆ ಶಾಸಕ ಸೋಮಸೇಖರ್ ರೆಡ್ಡಿ ಪುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.ಬಳ್ಳಾರಿ ಗಣೇಶ್ ಕಾಲೋನಿಯಲ್ಲಿ ಚರಂಡಿ ನೀರು ನಿಂತು ಇಡಿ ಕಾಲೋನಿ ಜಲಾವೃತಗೊಂಡಿದೆ. ಈ ಹಿನ್ನಲೆಯಲ್ಲಿ ನಿವಾಸಿಗಳು ಮನೆಯಿಂದ ಹೊರಬಂದಿ ಬೀದಿಯಲ್ಲಿ ನಿಂತಿದ್ದಾರೆ. ಇದರಿಂದ ಕೆಂಡಾಮಂಡಲರಾದ ಶಾಸಕ ಸೋಮಶೇಖರ್ ರೆಡ್ಡಿ ಜಲಾವೃತವಾದ ಮನೆಯ ಕಟ್ಟೆಯ ಮೇಲೆ ಕುಳಿತು ಮಹಾನಗರ ಪಾಲಿಕೆ ಆಯುಕ್ತೆ ತುಷಾರ್ ಮಣಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 

ನಗರದಲ್ಲಿ ಪದೇಪದೇ ಆಗ್ತಿರೋ ಯುಜಿಡಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿದ್ದಾರೆ. ಈ ಹಿನ್ನಲೆಯಲ್ಲಿ ತಕ್ಷಣ ಅಧಿಕಾರಿಗಳು ವಾಹನಗಳನ್ನು ತರಿಸಿ ಚರಂಡಿ ಕ್ಲೀನಿಂಗ್ ಕಾರ್ಯ ನಡೆಸಿದ್ದಾರೆ.

 

 
ಇದರಲ್ಲಿ ಇನ್ನಷ್ಟು ಓದಿ :