ಕಲಬುರಗಿ ಜಿಲ್ಲೆಯ ಚಿಂಚೋಳಿ ಮತಕ್ಷೇತ್ರದ ಶಾಸಕ ಡಾ.ಉಮೇಶ ಜಾಧವ ಪ್ರಯಾಣಿಸುತ್ತಿದ್ದ ವಾಹನ ಪಲ್ಟಿಯಾಗಿದ್ದು, ಘಟನೆಯಲ್ಲಿ ಶಾಸಕರ ಕೈಗೆ ಗಾಯಗಳಾಗಿವೆ. ಚಿಂಚೋಳಿ ತಾಲೂಕಿನ ಪೋಲಕಪಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಮಿರಿಯಾಣ ಕಡೆ ಪ್ರಯಾಣ ಬೆಳೆಸುತ್ತಿದ್ದಾಗ ಶಾಸಕರು ಪ್ರಯಾಣಿಸುತ್ತಿದ್ದ ವಾಹನಕ್ಕೆ ಆಕಳು ಅಡ್ಡಬಂದಿದೆ. ಹೀಗಾಗಿ ಆಕಳನ್ನು ರಕ್ಷಿಸುವ ಭರದಲ್ಲಿ ಚಾಲಕ ಯತ್ನಿಸುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಶಾಸಕ ಡಾ.ಉಮೇಶ ಜಾಧವರ ಕೈಗೆ ಹಾಗೂ ಜನಾರ್ಧನ ಎಂಬುವರಿಗೆ