ಶತಮಾನಗಳಿಂದಲೂ ನಡೆದುಕೊಂಡು ಬರುತ್ತಿರುವ ಗಗನಚುಕ್ಕಿ ಜಲಪಾತೋತ್ಸವದಲ್ಲಿ ಶಾಸಕರೊಬ್ಬರು ಬುಲೆಟ್ ಓಡಿಸಿ ಗಮನ ಸೆಳೆದಿದ್ದಾರೆ. ಮಂಡ್ಯದ ಮಳವಳ್ಳಿಯಲ್ಲಿ ಶತಮಾನಗಳಿಂದಲೂ ನಡೆದುಕೊಂಡು ಬರುತ್ತಿರುವ ಜಲಪಾತೋತ್ಸವವು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಹೀಗಂತ ಮಳವಳ್ಳಿ ಶಾಸಕ ಕೆ.ಅನ್ನದಾನಿ ಹೇಳಿದ್ರು.ಗಗನಚುಕ್ಕಿ ಜಲಪಾತೋತ್ಸವದ ಅಂಗವಾಗಿ, ಜಲಪಾತದ ಸೌಂದರ್ಯ, ರಕ್ಷಣೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯಿಂದ ಗಗನಚುಕ್ಕಿವರೆಗೆ ಬೈಕ್ ಮೂಲಕ ಹೊರಟ, ಟೂರಿಸಂ ಬೈಕ್ ರ್ಯಾಲಿಗೆ ಚಾಲನೆ ನೀಡಿದ್ರು. ಜನೇವರಿ 18 ಮತ್ತು