ಬಯಲು ಬರ್ಹಿದೆಸಿ ಮುಕ್ತ ಮಾಡಲು ಶಾಸಕರೋಬ್ಬರು ಪಣತೊಟ್ಟಿದ್ದು, ಕ್ಷೇತ್ರದ ಹಳ್ಳಿ ಹಳ್ಳಿಗೆ ತೆರಳಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸೂಗೂರು ಗ್ರಾಮದಲ್ಲಿ ಶೌಚಾಲಯದ ಬಗ್ಗೆ ಜನರಿಗೆ ಅರಿವು ಮೂಡಿಸಿದ್ರು.ಶಾಸಕ ರಾಜುಗೌಡ ನೇತೃತ್ವದಲ್ಲಿ ಇವತ್ತು ವಿವಿಧ ಗ್ರಾಮಕ್ಕೆ ತೆರಳಿ ಬಯಲು ಶೌಚ್ಯ ಬಗ್ಗೆ ತಿಳಿ ಹೇಳಿದ್ರು. ಅಲ್ಲದೆ ಸರ್ಕಾರದ ಸಹಾಯದಿಂದ ತಾಲೂಕಿನ ಪ್ರತಿಯೊಬ್ಬರು ಮನೆಯಲ್ಲೇ ಶೌಚಾಲಯ ನಿರ್ಮಿಸಿಕೊಳ್ಳಬೇಕು. ಬಯಲಿನಲ್ಲಿ ಸೌಚಕ್ಕೆ ಹೋಗುವುದರಿಂದ ಪರಿಸರ ಕೆಟ್ಟು ವಿವಿಧ ರೋಗಗಳಿಗೆ ತುತ್ತಾಗಬೇಕಾಗುತ್ತೆ ಎಂದರು.