ಸಿಎಂ ನಮ್ಮ ಕುಟುಂಬ ಸರ್ವನಾಶಲು ಸೂಚನೆ ನೀಡಿದ್ದಾರೆ ಎಂದ ಶಾಸಕ!

ಬೆಂಗಳೂರು, ಬುಧವಾರ, 13 ಫೆಬ್ರವರಿ 2019 (16:48 IST)

ಸಿಎಂ ಹಾಗೂ ಅವರ ಸಹೋದರರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸಚಿವ ಹೆಚ್.ಡಿ. ರೇವಣ್ಣ ತಮ್ಮನ್ನು ಹಾಗೂ ತಮ್ಮ ಕುಟುಂಬವನ್ನು ಸರ್ವನಾಶ ಮಾಡಲು ಸೂಚನೆ ನೀಡಿದ್ದಾರೆ. ಅದರಂತೆ ಜೆಡಿಎಸ್ ಗೂಂಡಾ ಕಾರ್ಯಕರ್ತರು ತಮ್ಮ ಮನೆಯ ಮೇಲೆ ದಾಂಧಲೆ ನಡೆಸಿ ತಮ್ಮ ಕುಟುಂಬಸ್ಥರನ್ನು ಕೊಲ್ಲುವ ಪ್ರಯತ್ನ ನಡೆಸಿದ್ದಾರೆ ಎಂದು ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡ ದೂರಿದ್ದಾರೆ.


ತಮ್ಮ ಮನೆಯ ಮೇಲೆ ದಾಳಿ ಮಾಡಲು ಬಂದಿದ್ದ ಜೆಡಿಎಸ್ ಗೂಂಡಾಕಾರ್ಯಕರ್ತರು ಸಚಿವ ರೇವಣ್ಣ ಮತ್ತು ಕುಮಾರಸ್ವಾಮಿ ತಮ್ಮ ಕುಟುಂಬವನ್ನು ನಾಶ ಮಾಡಲು ಹೇಳಿದ್ದಾರೆ. ಇದಕ್ಕೆಲ್ಲ ನಾನು ಹೆದರುವುದಿಲ್ಲ ಎಂದರು.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ವಿಧಾನಸಭೆಯ ಅಧಿವೇಶನದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ದಾಂಧಲೆ ನಡೆದಿದೆ. ಇದರ ಹಿಂದೆ ಸಚಿವ ರೇವಣ್ಣ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕುಮ್ಮಕ್ಕಿದೆ ಎಂದು ದೂರಿದರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿಟಿಯು ವಿಂಗಡನೆಗೆ ಹೆಚ್ಚುತ್ತಿದೆ ವಿರೋಧ

ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ ವಿಂಗಡನೆಗೆ ವಿರೋಧ ಹೆಚ್ಚಾಗುತ್ತಿದೆ.

news

ಬಿಎಸ್ವೈಗೆ ಆಡಿಯೋ ಸಂಕಷ್ಟ ದೂರ ಮಾಡಲು ನಡೆಯಿತು ಪೂಜೆ!

ಆಪರೇಷನ್ ಕಮಲ ಆಡಿಯೋ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಯಡಿಯೂರಪ್ಪನವರಿಗೆ ಸಂಕಷ್ಟ ತಂದೊಡ್ಡಿದ್ದರೆ, ಇತ್ತ ...

news

ವೆಲೈಂಟೈನ್ಸ್ ಡೇ; ಪ್ರೇಮಿಗಳಿಗೆ ಶ್ರೀರಾಮ ಸೇನೆ ಖಡಕ್ ಎಚ್ಚರಿಕೆ

ವೆಲೈಂಟೈನ್ಸ್ ಡೇ ಗೆ ಪ್ರೇಮಿಗಳಿಗೆ ಖಡಕ್ ಎಚ್ಚರಿಕೆಯನ್ನು ಶ್ರೀ ರಾಮ್ ಸೇನೆ ಕೊಟ್ಟಿದೆ.

news

ಗೌಡರ ವಿರುದ್ಧ ಅವಹೇಳನ; ಬಿಜೆಪಿ ಶಾಸಕನ ವಿರುದ್ಧ ಜೆಡಿಎಸ್ ಆಕ್ರೋಶ

ಮಾಜಿ ಪ್ರಧಾನಿ ಹೆಚ್ .ಡಿ.ದೇವೇಗೌಡರ ಹಾಗೂ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಹಗುರವಾಗಿ ಮಾತನಾಡಿರುವ ...