ಬೆಂಗಳೂರು: ನಿನ್ನೆ ಸಿಎಂ ಕುಮಾರಸ್ವಾಮಿ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಅಲ್ಲಿ ವಸತಿ ಸಮುಚ್ಚಯವೊಂದನ್ನು ಉದ್ಘಾಟಿಸುವ ಕಾರ್ಯಕ್ರಮವಿತ್ತು. ಈ ವೇಳೆ ಅಲ್ಲಿಗೆ ಬಂದಿದ್ದ ಎಂಎಲ್ ಸಿ ಮರಿತಿಬ್ಬೇಗೌಡ ಪಿಎಸ್ಐ ಒಬ್ಬರ ಮೇಲೆ ಆವಾಜ್ ಹಾಕಿದ ಘಟನೆ ನಡೆದಿದೆ.ಸಿಎಂ ಕಾರ್ಯಕ್ರಮಕ್ಕೆ ಕೊಂಚ ತಡವಾಗಿ ಆಗಮಿಸಿದ ಎಂಎಲ್ ಸಿ ಮರಿತಿಬ್ಬೇಗೌಡರ ಕಾರನ್ನು ಭದ್ರತೆ ಹೊಣೆ ಹೊತ್ತಿದ್ದ ಪಿಎಸ್ಐ ಬಸವರಾಜು ನೇತೃತ್ವದ ತಂಡ ತಡೆಹಿಡಿಯಿತು. ಇದರಿಂದ ಕೆಂಡಾಮಂಡಲರಾದ ಶಾಸಕರು ನಾನು ಯಾರೂಂತ ಗೊತ್ತಿಲ್ವಾ