ದೆಹಲಿ(ಜು.28): ಪ್ರಧಾನಿ ನಮ್ಮ ಫೋನ್ಗಳಲ್ಲಿ ಆಯುಧವನ್ನು ಸೇರಿಸಿದ್ದಾರೆ. ಅದನ್ನು ಭಾರತದ ಪ್ರಜಾಪ್ರಭುತ್ವದ ಆತ್ಮಕ್ಕೆ ಹೊಡೆಯಲು ಬಳಸಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. •ಪೆಗಾಸಸ್ ಕುರಿತು ಪ್ರಧಾನಿ ಮೋದಿ ಅವರನ್ನು ಟೀಕಿಸಿದ ರಾಹುಲ್ ಗಾಂಧಿ •ನಮ್ಮ ಫೋನಲ್ಲಿ ಮೋದಿ ವೆಪನ್ ಇಟ್ಟಿದ್ರು ಎಂದ ಕಾಂಗ್ರೆಸ್ ನಾಯಕಪೆಗಾಸಸ್ ಬಗ್ಗೆ ಪ್ರತಿಕ್ರಿಸಿದ ಅವರು, ಈಗ ಸಂಸತ್ತಿನಲ್ಲಿ ಪ್ರತಿಪಕ್ಷಗಳ ಬೇಡಿಕೆಗಳ ಬಾಯಿ ಮುಚ್ಚಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದಿದ್ದಾರೆ. ವಿರೋಧ ಪಕ್ಷಗಳ ಸಭೆಯ ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ್ದಾರೆ.