ರಾಜಧಾನಿಯ ಬಸವನಗುಡಿಯ ಪಾರ್ಕ್ ಗಳಲ್ಲಿ ಸೂರ್ಯನ ತೇಜಸ್ಸು ದಿನೇ ದಿನೇ ಇಮ್ಮಡಿಸುತ್ತಿದೆ.ಬೆಂಗಳೂರು ದಕ್ಷಿಣ ಲೋಕಸಭಾ ಬಿಜೆಪಿ ಅಭ್ಯರ್ಥಿಯನ್ನು ಕಂಡಾಕ್ಷಣ ಪಾರ್ಕ್ ಗಳಲ್ಲಿ ವಾಕಿಂಗ್, ಜಾಗಿಂಗ್ ಮಾಡುತ್ತಿದ್ದ ನಾಗರೀಕರು ಮೋದಿ, ಮೋದಿ ಎಂದು ಜಯಕಾರ ಹಾಕುತ್ತಾ ತೇಜಸ್ವಿ ಸೂರ್ಯರವರ ಬಳಿ ಬಂದು ಬೆಂಬಲ ಸೂಚಿಸುತ್ತಿದ್ದಾರೆ. ಅಭ್ಯರ್ಥಿ ಹಿಂದೆಯೇ ಹೆಜ್ಜೆ ಹಾಕಿದರೆ, ಇನ್ನು ಕೆಲವರು ಬಿಜೆಪಿ ಕರಪತ್ರಗಳನ್ನು ಪಡೆದು ತಾವು ಹಂಚಲು ಮುಂದಾಗಿ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಅಷ್ಟರ ಮಟ್ಟಿಗೆ ಇಲ್ಲಿ