ಬಿ.ಎಸ್.ಯಡಿಯೂರಪ್ಪ ಹುಟ್ಟೂರಲ್ಲಿ ಮೋದಿ, ಷಾ ಪ್ರತಿಕೃತಿ ದಹನ

ಮಂಡ್ಯ, ಶುಕ್ರವಾರ, 6 ಸೆಪ್ಟಂಬರ್ 2019 (16:23 IST)

ಮಹತ್ವದ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಹುಟ್ಟೂರಲ್ಲಿ ಬಿಜೆಪಿ ವಿರುದ್ಧ ಭಾರೀ ಪ್ರತಿಭಟನೆ ನಡೆಸಲಾಗಿದೆ.

ಡಿಕೆ ಶಿವಕುಮಾರ್ ಬಂಧನ ವಿರೋಧಿಸಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ತವರು ಮಂಡ್ಯ  ಕೆ.ಆರ್.ಪೇಟೆಯ ಬೂಕನಕೆರೆಯಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಕೇಂದ್ರ ಸಚಿವ ಅಮೀತ್ ಷಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಕೇಂದ್ರದ ಗೃಹ ಸಚಿವ  ಅಮೀತ್ ಷಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದಂತೆ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತಾಳ ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರವು ಸೇಡಿನ ಕ್ರಮವನ್ನು ಕೈಬಿಟ್ಟು ಕೂಡಲೇ ಡಿ.ಕೆ.ಶಿವಕುಮಾರ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ ಮತ್ತು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿ.ಡಿ.ಹರೀಶ್ ಒತ್ತಾಯಿಸಿದ್ರು.
 
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮೀತ್ ಷಾ ಅವರ ಪ್ರತಿಕೃತಿಗಳನ್ನು ಸುಟ್ಟು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. 
 

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪೊಲೀಸರೆಂದು ಹೇಳಿ ಯುವತಿಯರಿಗೆ ಲೈಂಗಿಕ ಸುಖದ ಬೇಡಿಕೆ ಇಟ್ಟ ಭೂಪರು

ಪೊಲೀಸ್ ಅಂತ ಹೇಳಿರೋ ಖದೀಮರಿಬ್ಬರು ಪಾರ್ಕಿನಲ್ಲಿ ಕುಳಿತಿದ್ದ ಯುವತಿಯನ್ನ ಲೈಂಗಿಕವಾಗಿ ಬಳಸಿಕೊಳ್ಳಲು ...

news

ಖಾಲಿ ಇರುವ ಹುದ್ದೆಗಳು ಶ್ರೀಘ್ರದಲ್ಲಿ ಭರ್ತಿ: ಪ್ರಭು ಚೌಹಾಣ್

ಬೆಂಗಳೂರು: ಪಶುಸಂಗೋಪನಾ ಇಲಾಖೆಯ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಇಂದು ಮೊದಲ ಬಾರಿಗೆ, ಸಚಿವರಾದ ...

ಬರ್ತಡೇ ಕೇಕ್ ತಿಂದ ಅಪ್ಪ-ಮಗ ಹೆಣವಾದ್ರು

ಆ ಮನೆಯ ಮಗನ ಹುಟ್ಟುಹಬ್ಬವಿತ್ತು. ಎಲ್ಲರೂ ಸಂಭ್ರಮದಲ್ಲಿದ್ದರು. ಆದರೆ ಕೇಕ್ ರೂಪದಲ್ಲಿ ಬಂದ ಜವರಾಯ ಹುಟ್ಟು ...

news

ನೆರೆ ಪರಿಹಾರ ಚೆಕ್ ಪಡೆಯಲು ಲಂಚ ಕೊಡಬೇಕಾ?

ರಾಜ್ಯದಲ್ಲಿ ನೆರೆ ಪರಿಸ್ಥಿತಿಯಿಂದ ಸಹಸ್ರಾರು ಜನರ ಬದುಕು ಬೀದಿಗೆ ಬಿದ್ದಿದೆ. ಈ ನಡುವೆ ಸರಕಾರ ಪರಿಹಾರ ...