ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಗೆ ಕೊನೆಗೂ ಜಾಮೀನು ಮಂಜೂರು ಮಾಡಲಾಗಿದೆ.ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ನ್ಯಾಯಪೀಠ ಇಂದು ತೀರ್ಪು ಕಾಯ್ದಿರಿಸಿತ್ತು. ಆರೋಪಿ ಪರ-ವಿರೋಧಿ ವಕೀಲರಿಬ್ಬರೂ ಇಂದು ಕೋರ್ಟ್ ಗೆ ಹಾಜರಾಗಿದ್ದರು.ಅದರಂತೆ ತೀರ್ಪು ನೀಡಿದ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದರಿಂದ ಮೂರು ತಿಂಗಳ ನಲಪಾಡ್ ಸೆರೆವಾಸ ಅಂತ್ಯವಾಗಿದೆ. ನಲಪಾಡ್ ಪರ ವಕೀಲ ಬಿವಿ ಆಚಾರ್ಯ ವಾದ ಮಂಡಿಸಿದ್ದರು.ತಾಜಾ