ತಮ್ಮ ಕ್ಷೇತ್ರಕ್ಕೆ 7.64 ಕೋಟಿ ಅನುದಾನ ಬಿಡುಗಡೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ S.T.ಸೋಮಶೇಖರ್ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಕ್ಷೇತ್ರದಲ್ಲಿ ಸಮಸ್ಯೆ ಆಗಿತ್ತು. ಒಂದೇ ಒಂದು ಬೋರ್ವೆಲ್ ಕೊರೆಸಲು ಆಗಿರಲಿಲ್ಲ. ಧರಣಿ ಕೂರೋದಾಗಿ ಹೇಳಿದ್ದೆ. ಈ ಸಂಬಂಧ ಬಿಬಿಎಂಪಿ ಕಮೀಷನರ್ ಹಾಗೂ ರಾಕೇಶ್ ಸಿಂಗ್ ಅವರ ಜೊತೆಯೂ ಮಾತನಾಡಿದ್ದೆ. ಟ್ಯಾಂಕರ್ಗಳಲ್ಲಿ ನೀರು ಕೊಡೋದಕ್ಕೂ ಸಮಸ್ಯೆ ಆಗಿತ್ತು. ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಬಳಿಯೂ ಕೆಂಪೇಗೌಡ ಬಡಾವಣೆ ವೀಕ್ಷಣೆಗೆ