ಬೆಂಗಳೂರು: ನಿರೀಕ್ಷೆಯಂತೇ ಮುಂಗಾರು ಮಳೆ ಕೇರಳ ಪ್ರವೇಶಿಸಿದೆ. ಜೂನ್ 1 ರಂದು ಮುಂಗಾರು ಪ್ರವೇಶವಾಗಬಹುದು ಎಂದು ಈ ಮೊದಲು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನಿಗದಿತ ಸಮಯಕ್ಕೇ ಮುಂಗಾರಿನ ಪ್ರವೇಶವಾಗಿರುವುದು ವಿಶೇಷ. ಈ ವರ್ಷ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.ಕಳೆದ ಮೂರು ದಿನಗಳಿಂದ ಕೇರಳದಲ್ಲಿ ಮಳೆ ಸುರಿಯುತ್ತಿದೆ. ಕರ್ನಾಟಕದ ಕರಾವಳಿ ಭಾಗದಲ್ಲೂ ಮಳೆಯ ಆಗಮನವಾಗಿದೆ.