ಬೆಂಗಳೂರು(ಜು.12): ಕಳೆದ ಎರಡು ವರ್ಷಗಳಿಂದಲೂ ಬೆಳಗಾವಿಯ ಸುವರ್ಣಸೌಧದಲ್ಲಿ ರಾಜ್ಯ ಸರ್ಕಾರ ಅಧಿವೇಶನವನ್ನೇ ನಡೆಸಲಿಲ್ಲ. ಒಂದು ಪ್ರವಾಹದಿಂದ ಮತ್ತೊಂದು ಕೊರೋನಾದಿಂದ ಈ ಎರಡು ಕಾರಣಗಳಿಂದ ಎರಡು ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಿಲ್ಲ. ಆದರೆ ಈ ಬಾರಿಯ ಮಳೆಗಾಲದ ಅಧಿವೇಶನವನ್ನು ಬೆಳಗಾವಿಯಲ್ಲೇ ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಕಳೆದ ಅಧಿವೇಶನದ ಸಂದರ್ಭದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿತ್ತು. ನಂತರ ಮುಂದಿನ ಅಧಿವೇಶನ ಅಲ್ಲೇ ನಡೆಸುವ ಬಗ್ಗೆ ಅಂದು ಆಲೋಚನೆ