ಡ್ರಿಪ್ಸ್ನಲ್ಲಿ ಪ್ಲಾಸ್ಮಾ ಬದಲಿಗೆ ಮೂಸಂಬಿ ರಸ ನೀಡಿದ ಪರಿಣಾಮ ಡೆಂಗ್ಯೂ ರೋಗಿಯೊಬ್ಬರು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆದಿದ್ದು, ಇದೀಗ ಇಡೀ ಆಸ್ಪತ್ರೆಯನ್ನು ವೈದ್ಯಾಧಿಕಾರಿಗಳು ಸೀಜ್ ಮಾಡಿದ್ದಾರೆ. ಪ್ರಯಾಗರಾಜ್ನಲ್ಲಿ ಜಾಲ್ವಾ ಎಂಬಲ್ಲಿ ಈ ಘಟನೆ ನಡೆದಿದ್ದು, ಡೆಂಗಿ ರೋಗಿಯೊಬ್ಬರ ದೇಹಕ್ಕೆ ಪ್ಲಾಸ್ಮಾ ನೀಡುವುದಕ್ಕೆ ಬದಲಾಗಿ ಮೂಸಂಬಿ ರಸ ನೀಡಲಾಗಿದ್ದು, ರೋಗಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ದೇಹಕ್ಕೆ ಮೂಸಂಬಿ ರಸ ಸೇರಿದ ಕಾರಣಕ್ಕೆ ರೋಗಿ ಪ್ರದೀಪ್ ಪಾಂಡೆ ಎಂಬ ರೋಗಿ