ಬೆಂಗಳೂರು: ಕೊರೋನಾ ಲಸಿಕೆಯ ಕೊರತೆ ಎದುರಿಸುತ್ತಿದ್ದ ರಾಜ್ಯಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. 5 ಲಕ್ಷ ಡೋಸ್ ಲಸಿಕೆ ಬಂದಿದ್ದು, ಇನ್ನು ನಾಲ್ಕು ದಿನ ಲಸಿಕೆ ವಿತರಣೆ ನಿರಾತಂಕವಾಗಿ ನಡೆಯಲಿದೆ. 18 ವರ್ಷ ಮೇಲ್ಪಟ್ಟವರಿಗೂ ಕೊರೋನಾ ಲಸಿಕೆ ವಿತರಿಸಲು ಮುಂದಾದ ಬಳಿಕ ರಾಜ್ಯಕ್ಕೆ ಎಲ್ಲರಿಗೂ ಲಸಿಕೆ ಪೂರೈಸುವುದು ತಲೆನೋವಾಗಿತ್ತು. ಇದೀಗ ಪುಣೆಯಿಂದ 5 ಲಕ್ಷ ಕೊವಿಶೀಲ್ಡ್ ಲಸಿಕೆ ಬಂದಿದೆ.ಆದರೆ ಈ ಲಸಿಕೆಗಳನ್ನು ಕೇವಲ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ವಿತರಿಸಲು ಸೂಚಿಸಲಾಗಿದೆ.