KSR ಡ್ಯಾಂನಿಂದ ತಮಿಳುನಾಡಿಗೆ ಬಿಡುಗಡೆಯಾಗುವ ನೀರಿನ ಪ್ರಮಾಣ ದಿನೇ ದಿನೇ ಹೆಚ್ಚಿಸಲಾಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶಕ್ಕೂ ಮುನ್ನ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಮಿಳುನಾಡಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುತ್ತಿದ್ದಾರೆ. ಭಾನುವಾರ KSR ಡ್ಯಾಂನಿಂದ ತಮಿಳುನಾಡಿಗೆ 5,238 ಕ್ಯೂಸೆಕ್ ನೀರು ಬಿಡುಗಡೆಯಾದರೆ, ಸೋಮವಾರ 5,243 ಕ್ಯೂಸೆಕ್ ನೀರು ಬಿಡುಗಡೆಯಾಗಿದೆ. ಮಂಗಳವಾರ 8,590 ಕ್ಯೂಸೆಕ್ ನೀರು ಹಾಗೂ ಇಂದು KSR ಡ್ಯಾಂನಿಂದ ತಮಿಳುನಾಡಿಗೆ 9,136 ಕ್ಯೂಸೆಕ್ ನೀರು ಬಿಡುಗಡೆಯಾಗುತ್ತಿದೆ. ಕೆಆರ್ಎಸ್ನಿಂದ