ಮಂಡ್ಯ : ಕಾವೇರಿ ನೀರಿಗಾಗಿ ತಮಿಳುನಾಡು ಸುಪ್ರೀಂ ಕೋರ್ಟ್ ಮೊರೆ ಹೋದ ಬೆನ್ನಲ್ಲೇ ಕೆಆರ್ಎಸ್ ಡ್ಯಾಂನಿಂದ ಹೆಚ್ಚಿನ ನೀರನ್ನು ಬಿಡುಗಡೆ ಮಾಡಲಾಗಿದೆ. ಸೋಮವಾರ ಕೆಆರ್ಎಸ್ ಡ್ಯಾಂನಿಂದ 5,243 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿತ್ತು. ಇಂದು 8,590 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜೂನ್ ಹಾಗೂ ಜುಲೈನ 28.84 ಟಿಎಂಸಿ ನೀರು ಬಿಡಿಸುವಂತೆ ಸುಪ್ರೀಂ ಕೋರ್ಟ್ಗೆ ತಮಿಳುನಾಡು ಅರ್ಜಿ ಸಲ್ಲಿಸಿತ್ತು. ಅರ್ಜಿಯ ಬೆನ್ನಲ್ಲೇ ಕಾವೇರಿ ನೀರಾವರಿ ನಿಗಮ ನೀರು ಬಿಡುಗಡೆ ಮಾಡಿದೆ.ಗರಿಷ್ಠ