ರಾಯಚೂರು : ಬೆಂಕಿ ಅವಘಡದಿಂದಾಗಿ ಮನೆಯಲ್ಲಿದ್ದ ತಾಯಿ ಹಾಗೂ ಇಬ್ಬರು ಮಕ್ಕಳು ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಶಕ್ತಿನಗರದಲ್ಲಿ ನಡೆದಿದೆ. ಶಕ್ತಿನಗರದ ಕೆಪಿಸಿ ಕ್ವಾಟ್ರಸ್ನಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಮಂಡ್ಯ ಮೂಲದ ರಂಜಿತಾ(33), ಮಕ್ಕಳಾದ ಮೃದಲ(13), ತಾರುಣ್ಯ(5) ಎಂದು ಗುರುತಿಸಲಾಗಿದೆ.ಮನೆಯಲ್ಲಿ ಅಳವಡಿಸಿದ್ದ ಎಸಿ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದ್ರೆ ಘಟನೆಗೆ ಇನ್ನೂ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ. ಮೃತ ರಂಜಿತಾ ಪತಿ ಸಿದ್ದಲಿಂಗಯ್ಯ