ಆಟವಾಡಲು ಹೋಗಿದ್ದಕ್ಕೆ ಮಗಳ ಕೈ ಸುಟ್ಟ ತಾಯಿ

ಬೆಂಗಳೂರು| Krishnaveni K| Last Modified ಭಾನುವಾರ, 11 ಜುಲೈ 2021 (09:40 IST)
ಬೆಂಗಳೂರು: ಆಟವಾಡಲು ಹೋದ ತಪ್ಪಿಗೆ ಇಲ್ಲೊಬ್ಬ ಮಹಾತಾಯಿ ತನ್ನ ಮಗಳ ಕೈಯನ್ನು ಕ್ಯಾಂಡಲ್ ನಿಂದ ಸುಟ್ಟ ಅಮಾನುಷ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

 
ಜೂನ್ ಅಂತ್ಯದಲ್ಲೇ ಈ ಘಟನೆ ನಡೆದಿದ್ದು, ತಾಯಿ ಮಗು ಆಟವಾಡುವಾಗ ಕೈಗೆ ಗಾಯ ಮಾಡಿಕೊಂಡಿದೆ ಎಂದು ನಾಟಕವಾಡಿದ್ದಳು. ಆದರೆ ಅನುಮಾನಗೊಂಡ ವೈದ್ಯರು ಪೊಲೀಸರಿಗೆ ದೂರು ನೀಡಿದ್ದರು.
 
ವಿಚಾರಣೆ ವೇಳೆ ಬಾಲಕಿ ಅಮ್ಮನ ನೀಚ ಕೃತ್ಯ ಬಯಲಿಗೆಳೆದಿದ್ದಾಳೆ. ಪಕ್ಕದ ಮನೆಯವರ ಜೊತೆ ಆಟವಾಡುತ್ತಿದ್ದುದನ್ನು ನೋಡಿ ಕೋಪಗೊಂಡ ಅಮ್ಮ ಕ್ಯಾಂಡಲ್ ನಿಂದ ಕೈ ಸುಟ್ಟಿದ್ದಾರೆ ಎಂದಿದ್ದಾಳೆ. ಇದೀಗ ತಾಯಿಯ ಮೇಲೆ ಕೇಸ್ ದಾಖಲಿಸಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :