ತನ್ನ ಒಡಲಲ್ಲಿ ಹುಟ್ಟಿದ ಅವಳಿ ಮಕ್ಕಳಿಗೆ ನೇಣು ಬಿಗಿದು ತಾಯಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮೈಸೂರಿನ ಬಂಡಿಪಾಳ್ಯದಲ್ಲಿ ಈ ಮನ ಕಲುಕುವ ಘಟನೆ ನಡೆದಿದೆ. ಮೃತರನ್ನು ಬಂಡಿಪಾಳ್ಯದಲ್ಲಿ ವಾಸವಿರುವ ಆಶಾ ಗೌಡ (30), ಶೌರ್ಯ ಗೌಡ (8), ಸುಪ್ರೀತ್ ಗೌಡ (8) ಎಂದು ಗುರುತಿಸಲಾಗಿದೆ. ಆಶಾ ಪತಿ ಮಹೇಶ್ ಎಪಿಎಂಸಿಯಲ್ಲಿ ಹಮಾಲಿ ಕೆಲಸ ನಿರ್ವಹಿಸುತ್ತಿದ್ದರು. ಪತಿ-ಪತ್ನಿ ಅನ್ಯೋನ್ಯವಾಗಿಯೇ ಇದ್ದರು ಎನ್ನಲಾಗಿದೆ. ಪತಿ ಮಹೇಶ್ ಕೆಲಸಕ್ಕೆ