ತಂದೆಯನ್ನು ಬೆಂಬಲಿಸುತ್ತಿದ್ದ ಮಗುವಿಗೆ ಇಂತಹ ಗತಿ ತಂದ ತಾಯಿ

ಬೆಂಗಳೂರು| pavithra| Last Modified ಶುಕ್ರವಾರ, 9 ಏಪ್ರಿಲ್ 2021 (07:19 IST)
ಬೆಂಗಳೂರು : ವಾದದಲ್ಲಿ ತಂದೆಯನ್ನು ಬೆಂಬಲಿಸಿದ 3 ವರ್ಷದ ಬಾಲಕಿಯನ್ನು ತಾಯಿ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ನಾಗರಬಾವಿ ಬಳಿಯ ಬಿಡಿಎ ಲೇಔಟ್ ನಲ್ಲಿ ನಡೆದಿದೆ.

ಮಹಿಳೆ ಧಾರಾವಾಹಿ ನೋಡುತ್ತಿದ್ದಾಗ ಪತಿ ನ್ಯೂಸ್ ಚಾನೆಲ್ ಹಾಕಿದ. ಆಗ ಮಹಿಳೆ ಪತಿಯೊಂದಿಗೆ ವಾಗ್ವಾದ ನಡೆಸಿದ್ದಾಳೆ. ಈ ವಾದದಲ್ಲಿ ಮಗು ತಂದೆಯನ್ನು ಬೆಂಬಲಿಸಿತು. ಇದರಿಂದ ಕೋಪಗೊಂಡ ಮಹಿಳೆ ಮನೆಯಲ್ಲಿ ಯಾರು ಇಲ್ಲದ ವೇಳೆ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿ ಮಗು ಕಾಣೆಯಾಗಿರುವ ದೂರು ದಾಖಲಿಸಿದ್ದಾಳೆ.

ಮಗುವಿನ ಶವ ಪತ್ತೆಯಾದ ಹಿನ್ನಲೆಯಲ್ಲಿ ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ತಾಯಿಯ ಬಗ್ಗೆ ಸಂಶಯ ಬಂದ ಹಿನ್ನಲೆಯಲ್ಲಿ ವಿಚಾರಣೆ ನಡೆಸಿದಾಗ ಆಕೆ ಸತ್ಯ ಒಪ್ಪಿಕೊಂಡಿದ್ದಾಳೆ.ಇದರಲ್ಲಿ ಇನ್ನಷ್ಟು ಓದಿ :