ಕ್ಷುಲ್ಲುಕ ಕಾರಣಕ್ಕೆ ದಂಪತಿ ಕಲಹ: ಮಗಳ ಹತ್ಯೆ ಮಾಡಿದ ತಾಯಿ

ಬೆಂಗಳೂರು| Krishnaveni K| Last Modified ಶುಕ್ರವಾರ, 9 ಏಪ್ರಿಲ್ 2021 (09:47 IST)
ಬೆಂಗಳೂರು: ಟಿವಿ ನೋಡುವ ವಿಚಾರಕ್ಕೆ ದಂಪತಿ ನಡುವೆ ಕಲಹವಾಗಿತ್ತು, ಇದೇ ಸಿಟ್ಟಿನ ಭರದಲ್ಲಿ ತಾಯಿಯೇ ಮೂರು ವರ್ಷದ ಮಗಳ ಸಾವಿಗೆ ಕಾರಣವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

 
ತಾಯಿ ಮಗಳು ಟಿವಿ ನೋಡುತ್ತಿದ್ದಾಗ ಮನೆಗೆ ಬಂದ ಪತಿ ನ್ಯೂಸ್ ಚಾನೆಲ್ ಹಾಕಿದ್ದಾನೆ. ಇದರಿಂದ ಸಿಟ್ಟಿಗೆದ್ದ ಪತ್ನಿ ಗಂಡನ ಜೊತೆ ಜಗಳವಾಡಿದ್ದಾಳೆ. ಈ ವೇಳೆ 3 ವರ್ಷದ ಮಗಳು ತಂದೆಯ ಪರ ಮಾತನಾಡಿದ್ದಕ್ಕೆ ಆಕೆಯ ಮೇಲೆ ಸಿಟ್ಟಿಗೆದ್ದ ತಾಯಿ ಆಕೆಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾಳೆ.
 
ಬಳಿಕ ಮಗು ಕಾಣೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಳು. ಆದರೆ ನೆರೆಹೊರೆಯವರು ಶವ ಗುರುತಿಸಿ ಪೊಲೀಸರಿಗೆ ತಿಳಿಸಿದ್ದಾರೆ. ವಿಚಾರಣೆ ನಡೆಸಿದಾಗ ಸತ್ಯ ಘಟನೆ ಬೆಳಕಿಗೆ ಬಂದಿದೆ.
ಇದರಲ್ಲಿ ಇನ್ನಷ್ಟು ಓದಿ :