ಹಾಸನ: ತಾಯಿ ಮಗುವಿನ ಸಂಬಂಧ ಯಾರೂ ಕೂಡ ದೂರಮಾಡಲಾಗದ ಅನುಬಂಧ. ತನ್ನ ಮಗುವಿಗಾಗಿ ತಾಯಿಯೊಬ್ಬಳು ತನ್ನ ಜೀವವನ್ನೇ ತ್ಯಾಗ ಮಾಡಿದ ಎಷ್ಟೋ ಘಟನೆಗಳನ್ನು ನಾವು ಕೇಳಿರುತ್ತವೆ. ಆದರೆ ಇಲ್ಲೊಬ್ಬಳು ತಾಯಿ ಪತಿಯ ಚಿಕಿತ್ಸೆಗಾಗಿ ಹೆತ್ತ ಮಗುವನ್ನೇ ಮಾರಾಟ ಮಾಡಿದ್ದಾಳೆ. ಅನಾರೋಗ್ಯದಿಂದ ಬಳಲುತ್ತಿರುವ ಪತಿಯ ಚಿಕಿತ್ಸೆಗಾಗಿ ಜ್ಯೋತಿ ಎಂಬಾಕೆ ತನ್ನ ಮೂರು ತಿಂಗಳ ಗಂಡು ಮಗುವನ್ನು 22 ಸಾವಿರ ರೂ.ಗಾಗಿ ಮಾರಾಟ ಮಾಡಿದ್ದಾಳೆ. ಬೇಲೂರಿನ ನಿವಾಸಿಯಾಗಿದ್ದ ನಿವೃತ್ತ ನರ್ಸ್ ಶಾಂತಮ್ಮ ಅವರಿಗೆ