ತುಮಕೂರು : ಟಾಟಾ ಏಸ್, ಕ್ಯಾಂಟರ್ ಹಾಗೂ ಖಾಸಗಿ ಬಸ್ ಮಧ್ಯೆ ಸರಣಿ ಅಪಘಾತ ನಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ನಡೆದಿದೆ. ಚಿಕ್ಕನಹಳ್ಳಿ ಬಳಿ ಶನಿವಾರ ಬೆಳಗಿನ ಜಾವ ಘಟನೆ ನಡೆದಿದ್ದು, ಟಾಟಾ ಏಸ್ನಲ್ಲಿದ್ದ ಇಬ್ಬರು ದುರ್ಮರಣ ಹೊಂದಿದ್ದಾರೆ. ಮೃತರನ್ನು ಕಲಬುರಗಿ ಜಿಲ್ಲೆಯ ಅರಳಗುಡಿ ಗ್ರಾಮದ ಭೀಮಾಬಾಯಿ (70) ಹಾಗೂ ಮಹಾಂತಪ್ಪ (50) ಎಂದು ಗುರುತಿಸಲಾಗಿದೆ. ಮೃತರು ತಮ್ಮ